HV Rajeeva
Official page of H.V.Rajeeva Ex-President of MysuruUrbanDevelopment Authority (MUDA) Mysuru.
Official page of H.V.Rajeeva President of Mysuru Urban Development Authority (MUDA) Mysuru.
17/08/2026
ಶ್ರೀಮತಿ ಮಮತ ಹಾಗೂ ಶ್ರೀ ಕುಮಾರ್, ಬಸವೇಶ್ವರನಗರ, ಮೈಸೂರು ನಿವಾಸಿಗಳ ಪುತ್ರನ ನಿಶ್ಚಿತಾರ್ಥ ಸಮಾರಂಭವು ಮೈಸೂರಿನ ರಾಜರಾಜೇಶ್ವರಿ ನಗರದಲ್ಲಿರುವ ಲುಕ್ಸಿ ಅಟ್ ಮಾಸಸ್ಪಿಯರ್ ಬ್ಯಾಂಕ್ವೆಟ್ ಹಾಲ್ನಲ್ಲಿ ನೆರವೇರಿತು. ಈ ಶುಭ ಸಂದರ್ಭದಲ್ಲಿ ಭಾಗವಹಿಸಿ, ನವ ಜೋಡಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿ, ಅವರ ಮುಂದಿನ ದಾಂಪತ್ಯ ಜೀವನ ಸುಖ, ಸಂತೋಷ, ಸಮೃದ್ಧಿ ಹಾಗೂ ಯಶಸ್ಸಿನಿಂದ ಕೂಡಿರಲಿ ಎಂದು ಹಾರೈಸಿ ಆಶೀರ್ವದಿಸಲಾಯಿತು.
16/08/2026
ಕನ್ನಡ ಸಾಹಿತ್ಯ ಕಲಾಕೂಟ ಮೈಸೂರು, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಹಾಗೂ ಶಾಶ್ವತ ಸೇವಾ ಸ್ಕೂಲ್, ಆಲನಹಳ್ಳಿ, ಮೈಸೂರು ವತಿಯಿಂದ ಸ್ವಾತಂತ್ರ್ಯ ಹೋರಾಟಗಾಟಗಾರರ ಚಿತ್ರಕಲಾ ಪ್ರದರ್ಶನ ಮಾಧ್ಯಮದವರೊಂದಿಗೆ ಸ್ವಾತಂತ್ರ್ಯ ದಿನಾಚರಣೆ ಹಾಗೂ ಹಿರಿಯ ಪತ್ರಕರ್ತರಿಗೆ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿದ ಸಂದರ್ಭ.
16/08/2026
ಮೈಸೂರಿನ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ಚಾತುರ್ಮಾಸ್ಯದ ಪ್ರಯುಕ್ತ ಮಠಕ್ಕೆ ಭೇಟಿ ನೀಡಿ, ಕಿರಿಯ ಸ್ವಾಮೀಜಿಗಳಾದ ಶ್ರೀ ಶ್ರೀ ದತ್ತವಿಜಯಾನಂದ ತೀರ್ಥ ಸ್ವಾಮೀಜಿಗಳಿಗೆ ಫಲ ಸಮರ್ಪಣೆ ಮಾಡಿ ಆಶೀರ್ವಾದ ಪಡೆಯಲಾಯಿತು. ಜತೆಗೆ ಆಶ್ರಮದಲ್ಲಿ ನಡೆದ ಚಂಡಿಕಾ ಯಾಗದ ಪೂರ್ಣಾಹುತಿಯಲ್ಲಿ ಭಾಗವಹಿಸಿ ಶ್ರೀಗಳ ಮತ್ತು ಭಗವಂತನ ಕೃಪಾಶೀರ್ವಾದ ಪಡೆಯಲಾಯಿತು.
16/08/2026
ಶ್ರೀಮತಿ ಕವಿತಾ ಹೆಚ್.ಆರ್. ಹಾಗೂ ಶ್ರೀ ಎನ್. ಅಂಜನಪ್ಪ (ಅಜಯ್), ವಿದ್ಯಾರಣ್ಯಪುರಂ ನಿವಾಸಿ ಅವರ ಪುತ್ರನ ವಿವಾಹ ಸಮಾರಂಭದಲ್ಲಿ ಭಾಗವಹಿಸಿ, ವಧು-ವರರಿಗೆ ಆಶೀರ್ವದಿಸಿ ಶುಭ ಹಾರೈಸಿದ ಸಂತಸದ ಸಂದರ್ಭ@.
16/08/2026
ಶ್ರೀ ರಾಜೇಶ್ ಜೆ.ಎನ್. ಅವರು ಮೈಸೂರಿನ ಕುವೆಂಪುನಗರದಲ್ಲಿ ನೂತನವಾಗಿ ನಿರ್ಮಿಸಿರುವ *ನಾರಾಯಣ ನಿಲಯ”ದ ಗೃಹಪ್ರವೇಶ ಸಮಾರಂಭದಲ್ಲಿ ಭಾಗವಹಿಸಿ, ಶುಭ ಕೋರಿದ ಸಂತಸದ ಸಂದರ್ಭ.
16/08/2026
ಶ್ರೀಮತಿ ಜಯರತ್ನ ಹಾಗೂ ಶ್ರೀ ಹೋಮದೇವ ಜೆ.ಎಸ್., ಅಶೋಕಪುರಂ ನಿವಾಸಿಗಳು ನೂತನವಾಗಿ ನಿರ್ಮಿಸಿರುವ *NNPJH ನಿಲಯದ"* ಗೃಹಪ್ರವೇಶ ಸಮಾರಂಭದಲ್ಲಿ ಭಾಗವಹಿಸಿ, ಕುಟುಂಬದವರಿಗೆ ಶುಭಾಶಯಗಳನ್ನು ಕೋರಲಾಯಿತು.
16/08/2026
ಶ್ರೀಮತಿ ಎನ್. ಶಾರದಾಂಬ ಹಾಗೂ ಕೀರ್ತಿಶೇಷರಾದ ಶ್ರೀ ಎ. ಸತೀಶ್, ಮುಡುಗುಂಡ, ಕೊಳ್ಳೇಗಾಲ ತಾಲ್ಲೂಕು ಇವರ ಕುಟುಂಬದವರು ಮೈಸೂರಿನ ವಿಶ್ವೇಶ್ವರನಗರದಲ್ಲಿ ನೂತನವಾಗಿ ನಿರ್ಮಿಸಿರುವ “ಇಂಚರ ನಿಲಯ”ದ ಗೃಹಪ್ರವೇಶ ಸಮಾರಂಭದಲ್ಲಿ ಭಾಗವಹಿಸಿ ಶುಭ ಕೋರಲಾಯಿತು.
16/08/2026
ಶ್ರೀ ಅರಮನೆ ಪಂಚಗವಿ ಮಠ, ಚಾಮುಂಡಿಬೆಟ್ಟದ ತಪ್ಪಲು, ಮೈಸೂರು ವತಿಯಿಂದ ಆಯೋಜಿಸಿದ್ದ ಪರಮಪೂಜ್ಯ ನಿ.ಪ್ರ.ಸ್ವ. ಶ್ರೀ ಗೌರೀಶಂಕರ ಮಹಾಸ್ವಾಮಿಗಳವರ 74ನೇ ಆರಾಧನಾ ಮಹೋತ್ಸವ ಹಾಗೂ ಶ್ರೀಮಠದ ಜೀರ್ಣೋದ್ಧಾರ ಭೂಮಿಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂದರ್ಭ.
ಈ ಕಾರ್ಯಕ್ರಮಕ್ಕೆ ಆಗಮಿಸಿದ್ದ ಪರಮಪೂಜ್ಯ ಸುತ್ತೂರು ಶ್ರೀಗಳವರ ದರ್ಶನ ಪಡೆದು, ಆಶೀರ್ವಾದ ಪಡೆಯಲಾಯಿತು.
16/08/2026
ಶ್ರೀ ಭುವನೇಶ್ವರಿ ಸೌಹಾರ್ದ ಸಹಕಾರಿ ಸಂಘ, ವಿಶ್ವೇಶ್ವರನಗರ, ಮೈಸೂರು ವತಿಯಿಂದ ಆಯೋಜಿಸಿದ್ದ 2025-26ನೇ ಸಾಲಿನ 20ನೇ ವಾರ್ಷಿಕ ಸರ್ವಸದಸ್ಯರ ಮಹಾಸಭೆಯಲ್ಲಿ ಭಾಗವಹಿಸಿ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೆರವೇರಿಸಿದ ಸಂದರ್ಭ.
15/08/2026
ಶ್ರೀ ಬ್ರಹ್ಮತಂತ್ರ ಸ್ವತಂತ್ರ ಪರಕಾಲ ಮಠದ ೩೬ನೇ ಪೀಠಾಧಿಪತಿಗಳಾದ ಶ್ರೀಮದ್ ಅಭಿನವ ವಾಗೀಶ ಬ್ರಹ್ಮತಂತ್ರ ಸ್ವತಂತ್ರ ಪರಕಾಲ ಮಹಾದೇಶಿಕರ ಚಾತುರ್ಮಾಸ್ಯದ ಪ್ರಯುಕ್ತ, ಮಠಕ್ಕೆ ಭೇಟಿ ನೀಡಿ ಶ್ರೀಗಳವರಿಗೆ ಫಲ ಸಮರ್ಪಿಸಿ ಆಶೀರ್ವಾದ ಪಡೆಯಲಾಯಿತು.
Click here to claim your Sponsored Listing.