H R Leelavathi
Smt. H.R.Leelavathi blessed with a mellifluous voice and immaculate diction, is the tallest figure i
24/09/2026
ಉಳ್ಳವರು ಶಿವಾಲಯವ ಮಾಡುವರು: ಬಸವಣ್ಣ ಅವರ ವಚನ, ಪದ್ಮಚರಣ್ ಅವರ ಸಂಗೀತ ಸಂಯೋಜನೆ ಹಾಗು ಎಚ್ ಆರ್ ಲೀಲಾವತಿ ಅವರ ಗಾಯನ
ತಪ್ಪದೆ ಈ ಹಾಡನ್ನು ಕೇಳಿ!
ಉಳ್ಳವರು ಶಿವಾಲಯವ ಮಾಡಿದರು
ನಾನೇನ ಮಾಡಲಯ್ಯ ಬಡವನು
ಎನ್ನ ಕಾಲೇ ಕಂಬ , ದೇಹವೇ ದೇಗುಲ
ಶಿರವೇ ಹೊನ್ನ ಕಳಶವಯ್ಯ
ಕೂಡಲ ಸಂಗಮ ದೇವ ಕೇಳಯ್ಯ
ಸ್ಥಾವರಕ್ಕಳಿವುಂಟು ಜಂಗಮಕಿಲ್ಲ
ಬರಿಯ ಮನಸಿನಲ್ಲಿ ನಾನು: ತೀ ನಂ ಶ್ರೀ ಅವರ ರಚನೆ ಎಸ್ ಜಿ ರಘುರಾಂ ಅವರ ಸಂಗೀತ ಸಂಯೋಜನೆ ಹಾಗೂ ಗಾಯನ
ತಪ್ಪದೆ ಈ ಹಾಡನ್ನು ಕೇಳಿ!
ಬರಿಯ ಮನಸಿನಲ್ಲಿ ನಾನು
ತಿರುಗುತಿದ್ದೆ ಕೋಣೆಯೊಳಗೆ
ನೆರೆಯ ತಿರುಳು ನಿದ್ದೆ ಬರುವಗಳಿಗೆಯೊಂದಿಗೆ
ಹೊರಗಿನಿಂದ ಬಳೆಯ ಸದ್ದು ಸುಳಿದು ಬಂದಿತು .
ಯಾರು ಬಂದರೆಂದು ನೋಡ ಲೋರೆಗಣ್ಣು ಹರಿಯಿತತ್ತ
ಹಾರಿತೆದೆಯು ಮೈಯ ಪುಳಕ ಜುಮ್ಮನೆದ್ದಿತು
ಹೊರಗಿನಿಂದ ಬಳೆಯ ಸದ್ದು ಸುಳಿದು ಬಂದಿತು .
ಬಂದ ಹೆಣ್ಣು ನನ್ನ ಮಡದಿ
ಅಂದಿಗೆರಡುತಿಂಗಳಿಲ್ಲ
ನಿಂದು ಹಸೆಯಲವಳ ಕೈಯ ಹಿಡಿದುದು
ಒಂದು ಮಾತನಾಡಿ ಇಲ್ಲ ನಾನು ಅವಳಲಿ
ಹಾಗೆ ಒಂದು ಬಾರಿ ತನ್ನ ಕತ್ತನೊಲೆದಳು
ಬೇಗ ಕೈಯನೊಳಗೆ ನೀಡಿ ಇತ್ತ ಸರಿದಳು
ಬೆಳಕು ಕಡಮೆ ಕೋಣೆಯಲ್ಲಿ
ತಿಳಿಯದವಳ ಕೈಯಲೇನೋ
ತಿಳಿಯಿತೊಂದು ಮಾತ್ರ ನನಗೆ ಅವಳ ಪ್ರೇಮವು
ಒಂದು ಮಾತನಾಡಲಿಲ್ಲ ಒಂದು ನಿಮಿಷ ನಿಲ್ಲಲಿಲ್ಲ
ಬಂದ ಮಿಂಚು ಮರಳಿತಷ್ಟೆ ಸಾಕು ಪ್ರೇಮಕೆ
ಹೊಂದಿ ಹೃದಯವೆರಡು ತಿಳಿಯಲೇಕೆ ನುಡಿಗಳು
ಅಲ್ಲಿ ಇಲ್ಲಿ : ಡಿ ಎಸ್ ಕರ್ಕಿ ಅವರ ರಚನೆ, ಪದ್ಮಚರಣ್ ಅವರ ಸಂಯೋಜನೆ ಹಾಗೂ ಎಚ್ ಆರ್ ಲೀಲಾವತಿ ಅವರ ಗಾಯನ
ತಪ್ಪದೆ ಈ ಹಾಡನ್ನು ಕೇಳಿ!
ಅಲ್ಲಿ ಇಲ್ಲಿ ನಾ ನೋಡಿದಲ್ಲಿ ನೀ
ಮೂಡಿ ಮೂಡಿ ಬಂದೆ
ಕಣ್ಣಿಗದು ಏನೊ ಏನೊ ತಂದೆ
ಮನಕೆ ನೀ ಮೋಡಿ ಮಾಡಿ ಬಂದೆ
ನಿನ್ನ ನೋಡಿ ತಂತಾನೆ ಮಿಡಿದಿತೀ ನನ್ನ ಜೀವನಾಡಿ
ನಿಲ್ಲು ನೀ ಹೀಂಗ ಹಿಗ್ಗ ತೋಡಿ .
ನಸುಕಿನಲ್ಲಿ ಹೊಸ ಬೆಳಕು ಹರಿಯೆ ತುಳುಕುವುದು ನಿನ್ನ ಬೆಳಕು
ನಡುವೆ ಚೆಂದುಟಿಯ ಕೆಂಪು ಝಳುಕು
ತುಂಬಿದಾನಂದ ರಸದ ತುಳುಕು
ರಾಗವಾಗಿ ತಾಸಾಗಿಬರಲು ಅನುರಾಗ ಬೆರೆವುದಲ್ಲೆ
ಬೆಳಕೆ ಹಾಡಾಗಿ ಹರಿವುದಲ್ಲೆ!
ಇರುಳು ಚಂದಿರನ ಕಿರಣ ಸರಣಿಯಲಿ
ಇಳಿದು ಇಳಿದು ಬರುವೆ
ಮನಕೆ ನೀ ಮದಿರೆಯನ್ನೆ ತರುವೆ !
ಚಣದಿ ಚಿತ್ತವನು ಸೂರೆಗೊಳುವೆ
ನಿನ್ನ ಮುಗುಳು ನಗೆ ಸೋಂಕೆ ಸಾಕು ಮಿಡಿಯುವುದು ಎದೆಯವೀಣೆ
ನಿನಗೆ ಸರಿ ಯಾರು ? ಹೇಳು ಜಾಣೆ
ಪುಣ್ಯಸದನೇ ಹುಣ್ಣಿಮೆಯ ಚಂದ್ರ
ಕುಂಕುಮದ ತಿಲಕ ನಿನಗೆ !
ಭಾಗ್ಯದ ಲಕ್ಷ್ಮಿ ನೀನು ಮನೆಗೆ
ಮಂಗಳ ಗೌರಿ ಬಾರೆ ಮನಕೆ
ಬೆಳ್ಳಿ ಚಿಕ್ಕೆ ಮೂಗುತಿಯ ಹರಳು ಚಕಚಕನೆ ಹೊಳೆವುದಲ್ಲೆ
ನೀನೆ ಸಿಂಗರದ ಸೂತ್ರ ನಲ್ಲೆ !
ಭಜನ್ ಭರೋಂಸೆ ಅವಿನಾಶಿ : ಮೀರಾಬಾಯಿ ಅವರ ರಚನೆ, ಎಚ್ ಆರ್ ಲೀಲಾವತಿ ಅವರ ಸಂಗೀತ ಸಂಯೋಜನೆ ಹಾಗೂ ಗಾಯನ
ತಪ್ಪದೆ ಈ ಹಾಡನ್ನು ಕೇಳಿ!
ಭಜನ್ ಭರೋಂಸೆ ಅವಿನಾಶಿ
ಮೈ ತೋ ಭಜನ್ ಭರೋಂಸೆ ಅವಿನಾಶಿ
ಜಪ್ ತಪ್ ತೀರಥ್ ಕಛುಏ ನ ಜಾಣೂಂ ಫರತ್ ಮೈ ಉದಾಸೀ ರೇ
ಮಂತ್ರ್ ನೆ ತಂತ್ರ್ ಕಛುಏ ನ ಜಾಣೂಂ
ವೇದ್ ಪಢ್ಯೋ ನ ಗಾ ಕಾಶಿ
ಮೀರಾ ಕೆ ಪ್ರಭು ಗಿರ್ ಧರ್ ನಾಗರ್
ಚರಣಕಮಲ್ ಕೀ ಹುಂ ದಾಸಿ
15/09/2026
ಭಜನ್ ಭರೋಂಸೆ ಅವಿನಾಶಿ : ಮೀರಾಬಾಯಿ ಅವರ ರಚನೆ, ಎಚ್ ಆರ್ ಲೀಲಾವತಿ ಅವರ ಸಂಗೀತ ಸಂಯೋಜನೆ ಹಾಗೂ ಗಾಯನ
ತಪ್ಪದೆ ಈ ಹಾಡನ್ನು ಕೇಳಿ!
ಭಜನ್ ಭರೋಂಸೆ ಅವಿನಾಶಿ
ಮೈ ತೋ ಭಜನ್ ಭರೋಂಸೆ ಅವಿನಾಶಿ
ಜಪ್ ತಪ್ ತೀರಥ್ ಕಛುಏ ನ ಜಾಣೂಂ ಫರತ್ ಮೈ ಉದಾಸೀ ರೇ
ಮಂತ್ರ್ ನೆ ತಂತ್ರ್ ಕಛುಏ ನ ಜಾಣೂಂ
ವೇದ್ ಪಢ್ಯೋ ನ ಗಾ ಕಾಶಿ
ಮೀರಾ ಕೆ ಪ್ರಭು ಗಿರ್ ಧರ್ ನಾಗರ್
ಚರಣಕಮಲ್ ಕೀ ಹುಂ ದಾಸಿ
Category
Contact the public figure
Website
Address
Mysore