GPIER
GPIER THEATRE GROUP - MYSORE Since:1994
ಜಿ.ಪಿ.ಐ.ಇ.ಆರ್. ರಂಗ ತಂಡ: 1994ರಲ್ಲಿ ಸ್ಥಾಪನೆಗೊಂಡ ಜಿ.ಪಿ.ಐ.ಇ.ಆರ್. ಮೈಸೂರಿನ ಹೆಸರಾಂತ ಹವ್ಯಾಸಿ ರಂಗ ತಂಡ. ಇದುವರೆಗೆ ಐವತ್ತಕ್ಕೂ ಹೆಚ್ಚು ನಾಟಕಗಳನ್ನು ಸಿದ್ಧಪಡಿಸಿ ಕರ್ನಾಟಕದಾದ್ಯಂತ ಪ್ರದರ್ಶನ ನೀಡಿರುವ ಈ ತಂಡ ತನ್ನ ಗುಣಮಟ್ಟದ ಪ್ರಯೋಗಗಳಿಗೆ ಹೆಸರಾಗಿದೆ. ಅನೇಕ ಪ್ರಶಸ್ತಿ, ಬಹುಮಾನಗಳನ್ನು ಪಡೆದುಕೊಂಡಿರುವ ಜಿ.ಪಿ.ಐ.ಇ.ಆರ್. ತನ್ನ ಮೂಲಭೂತ ಕಳಕಳಿಯಾದ ಮಾನವೀಯತೆ, ಸಾಮಾಜಿಕ ಜಾಗೃತಿ, ಪರಿಸರ ಕಾಳಜಿ ಮುಂತಾದ ಜನಪರ ಮೌಲ್ಯಗಳಿಗೆ ಬದ್ಧವಾಗಿದೆ. ಈಗಾಗಲೇ ನೂರಾರು ರಂಗಕರ್ಮಿಗಳನ್ನು ಬೆಳೆಸಿ ಕನ್ನಡ ರಂಗಭೂಮಿ, ಹಿರಿತೆರೆ, ಕಿರಿತೆರೆಗಳಿಗೆ ಕೊಡುಗೆಯಾಗಿ ನೀಡಿರುವ ಜಿ.ಪಿ.ಐ.ಇ.ಆರ್. ಮೈಸೂರಿನ ರಂಗಾಯಣದ ಹಿರಿಯ ಕಲಾವಿದ ಮೈಮ್ ರಮೇಶ್‍ರವರ ಸಾರಥ್ಯದಲ್ಲಿ ಮುನ್ನಡೆಯುತ್ತಿದೆ.
ನಾಟಕ ಪ್ರದರ್ಶನಗಳ ಜೊತೆಗೆ ಪುಸ್ತಕ ಬಿಡುಗಡೆ, ವಿಚಾರ ಸಂಕಿರಣ, ವಿದ್ಯಾರ್ಥಿಗಳಿಗೆ ರಂಗತರಬೇತಿ ಶಿಬಿರ, ಪ್ರಸಕ್ತ ವಿದ್ಯಮಾನಗಳ ಕುರಿತುಚರ್ಚೆ, ವೈಜ್ಞಾನಿಕ, ವೈಚಾರಿಕ ಗೋಷ್ಠಿಗಳ ಜೊತೆಗೆ ಸಾಹಿತ್ಯಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರಲಾಗುತ್ತಿದೆ. ಹೀಗೆ ಸೃಜನಶೀಲ ಚಟುವಟಿಕೆಗಳಿಂದ ಜನರನ್ನು ರಂಜಿಸುತ್ತಾ, ಮನರಂಜನೆಯ ಜೊತೆಗೆ ರಂಗಭೂಮಿಯೆಡೆಗೆ ಹೊಸ ಪ್ರೇಕ್ಷಕ ವರ್ಗವನ್ನು ಕರೆತರುವುದು ಜಿ.ಪಿ.ಐ.ಇ.ಆರ್. ರಂಗ ತಂಡದ ಮುಖ್ಯಉದ್ದೇಶ.
ನಿರ್ದೇಶಕರ ಬಗ್ಗೆ:
ಮೈಮ್ ರಮೇಶ್ : ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನವರಾದ ಇವರು ಕಳೆದ ನಲವತ್ತ ಎಂಟು ವರ್ಷಗಳಿಂದ ರಂಗಭೂಮಿಗಳಲ್ಲಿ ನಟ, ನಿರ್ದೇಶಕ, ಸಂಘಟಕರಾಗಿ ಸೇವೆ ಸಲ್ಲಿಸಿದ್ದಾರೆ. ಭಾರತದ ಶ್ರೇಷ್ಠ ನಿರ್ದೇಶಕರೊಡನೆ ಕೆಲಸ ಮಾಡಿದ ಅನುಭವ. ಪಶ್ಚಿಮ ಬಂಗಾಲದ ಬಾದಲ್ ಸರ್ಕಾರ್ ಅವರೊಡನೆ ಮೂರನೇ ರಂಗಭೂಮಿಯಲ್ಲಿ ದುಡಿದ ಅನುಭವ. ಅಚಿಟನ್ ಚೆಕಾವ್, ಚೆರ್ರಿ ತೋಟ, ಶೇಕ್ಸ್‍ಪಿಯರ್‍ನ ‘ಕಿಂಗ್ ಲಿಯರ್’, ಗಿರೀಶ್ ಕಾರ್ನಾಡರ ‘ನಾಗಮಂಡಲ’ ಇವುಗಳನ್ನು ತುಳು ಭಾಷೆಗೆ ಅನುವಾದ ಮಾಡಿದ್ದಾರೆ. 1989ರಲ್ಲಿ ಬಿ.ವಿ.ಕಾರಂತರ ನೇತೃತ್ವದ ರಂಗಾಯಣಕ್ಕೆ ಕಲಾವಿದರಾಗಿ ಸಏರ್ಪಡೆ. ಮೂಕಾಭಿನಯದಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡಿ ಭಾರತದ ಶ್ರೇಷ್ಠ ಮೂಕಾಭಿನಯ ಪಟು ಎಂದೆನಿಸಿಕೊಂಡು ಇವರು ರಂಗಾಯಣದೊಂದಿಗೆ ಅಮೆರಿಕಾ, ಜರ್ಮನ್, ಆಸ್ಟ್ರಿಯ ಪ್ರವಾಸವನ್ನು ಮಾಡಿದ್ದಾರೆ. ಮಕ್ಕಳ ರಂಗಭೂಮಿಯಲ್ಲಿ 30 ವರ್ಷದ ಅನುಭವ ಹೊಂದಿರುವ ಮೈಮ್ ರಮೇಶ್ ರಂಗಾಯಣದ ಮಕ್ಕಳ ರಂಗಭೂಮಿಯ ಯೋಜನೆಯಡಿ ಸ್ವೀಡನ್ ಮತ್ತು ಫ್ರಾನ್ಸ್ ದೇಶದಲ್ಲಿ ನಡೆದ ಮಕ್ಕಳ ರಂಗಭೂಮಿಯ ಕಾರ್ಯಾಗಾರದಲ್ಲಿ ಭಾಗವಹಿಸಿದ್ದಾರೆ. ಇವರ ರಂಗಕಾರ್ಯ ವೈಕರಿಯನ್ನು ಗುರುತಿಸಿ ಕಾಸರಗೋಡಿನ ಗಡಿನಾಡ ಕಲಾವಿದರು ಶಿವರಾಂ ಕಾರಂತರಿಂದ ರಂಗಕರ್ಮಿ ಎಂಬ ಬಿರುದನ್ನು ಹಾಗು ದಕ್ಷಿಣ ಭಾರತದ ಚಲನಚಿತ್ರ ಕಲಾವಿದರು ಚೆನ್ನೈ ಇವರಿಗೆ ದ ‘ಕಲೈಸೆಲ್ವಮ್’ ಎಂಬ ಬಿರುದು ಪಡೆದ ಏಕೈಕ ಕನ್ನಡಿಗ ಹಿರಿಮೆ ಇವರದು. ರಂಗಾಯಣದಲ್ಲಿ 2001 ರಿಂದ ಪ್ರಾರಂಭಗೊಂಡ ಭಾರತೀಯ ರಂಗಶಿಕ್ಷಣ ಕೇಂದ್ರಕ್ಕೆ ಎರಡು ವರ್ಷ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದಾರೆ. ಚಿಕ್ಕಂದಿನಿಂದಲೇ ಯಕ್ಷಗಾನ ಕಲಿತ ಇವರು ಶಾಸ್ತ್ರೀಯ ನೃತ್ಯದಲ್ಲೂ ಭಾರತದ ನೃತ್ಯ ಪ್ರಕಾರಗಳಲ್ಲಿ ರಿಣತಿ ಪಡೆದ ಇವರು ಒಬ್ಬ ಶ್ರೇಷ್ಠ ನೃತ್ಯ ಸಂಯೋಜಕರಾಗಿದ್ದಾರೆ. ರಂಗಭೂಮಿಯಲ್ಲಿ ಎಲ್ಲಾ ಪ್ರಕಾರಗಳಲ್ಲೂ ಸಾಧನೆಯನ್ನು ಮಾಡುತ್ತಾ ಬಂದ ಇವರು ಒಬ್ಬ ಸೃಜನಶೀಲ ವ್ಯಕ್ತಿ. ನಾಟಕ ವಿಭಾಗದಲ್ಲಿ ನಮ್ಮ ನಾಡಿನ ಹೆಮ್ಮೆಯ ದೂರದರ್ಶನ “ಚಂದನ ಪ್ರಶಸ್ತಿ-2016”, ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ-2017, ಝೀ ಕನ್ನಡದ ಹೆಮ್ಮೆಯ ಕನ್ನಡಿಗ ಪ್ರಶಸ್ತಿ ಹಾಗೂ ಇನ್ನೂ ಹಲವಾರು ಪ್ರಶಸ್ತಿಗಳು ಮೈಮ್ ರಮೇಶ್‍ರವರಿಗೆ ಪ್ರಧಾನವಾಗಿದೆ.
09/09/2026
“ಸಂತ್ಯಾಗ ನಿಂತಾನ ಕಬೀರ”
ಜಿ.ಪಿ.ಐ.ಇ ಆರ್ ರಂಗತಂಡ, ಮೈಸೂರು
ಅಭಿನಯಿಸುವ ನಾಟಕ
“ಸಂತ್ಯಾಗ ನಿಂತಾನ ಕಬೀರ”
ಹಿಂದಿ ಮೂಲ: ಭೀಷ್ಮ ಸಹಾನಿ
ಕನ್ನಡ ನಾಟಕ ರೂಪ: ಗೋಪಾಲ ವಾಜಪೇಯಿ
ಮಾರ್ಗದರ್ಶನ: ಗುರುಗಳಾದ ಮೈಮ್ ರಮೇಶ್ Mime Ramesh
ವಿನ್ಯಾಸ ಮತ್ತು ನಿರ್ದೇಶನ:
ಎಂ.ಪಿ. ಹರಿದತ್ತ ಅರಮನೆನಗರಿ Haridatta Mp
ಸಹ ನಿರ್ದೇಶನ: ಬಿ. ಸುಮನ್ ರಾಜ್ Suman Raj
ಸಂಗೀತ: ದೇವಾನಂದ ವರಪ್ರಸಾದ್ Devanand Varaprasad
ಸಾಂಗತ್ಯ: ಸಿದ್ದೇಶ್ ಬದನವಾಳು, ಸುಬ್ರಹ್ಮಣ್ಯ
ವಸ್ತ್ರ ವಿನ್ಯಾಸ: ಬಿ.ಎಂ.ರಾಮಚಂದ್ರ
ಬೆಳಕಿನ ವಿನ್ಯಾಸ: ರಾಘವೇಂದ್ರ ಅಚ್ಚಪ್ಪ Rohith Shetty
ಪ್ರಸಾದನ: ದಿವ್ಯಾ ಮಹೇಶ್ ಕಲ್ಲತ್ತಿ
ರಂಗಸಜ್ಜಿಕೆ: ಶರತ್ ಕುಮಾರ್ ಕೆ.ವಿ Sharath kumar k v
ರಂಗ ನಿರ್ವಹಣೆ: ಮನು
ಪ್ರದರ್ಶನಗಳಿಗೆ ಸಂಪರ್ಕಿಸಿ: 9019370060 , 95358 77695
06/09/2026
ಇಂದು ಸಂಜೆ 6:30 ಕ್ಕೆ, ಕಲಾಮಂದಿರ ಆವರಣದ ಕಿರು ರಂಗಮಂದಿರದಲ್ಲಿ..
ಜಿ.ಪಿ.ಐ.ಇ ಆರ್ ರಂಗತಂಡ, ಮೈಸೂರು
ಅಭಿನಯಿಸುವ ನಾಟಕ
“ಸಂತ್ಯಾಗ ನಿಂತಾನ ಕಬೀರ”
ಹಿಂದಿ ಮೂಲ: ಭೀಷ್ಮ ಸಹಾನಿ
ಕನ್ನಡ ನಾಟಕ ರೂಪ: ಗೋಪಾಲ ವಾಜಪೇಯಿ
ಸಂಗೀತ: ದೇವಾನಂದ ವರಪ್ರಸಾದ್
ವಿನ್ಯಾಸ ಮತ್ತು ನಿರ್ದೇಶನ: ಎಂ.ಪಿ. ಹರಿದತ್ತ ಅರಮನೆನಗರಿ Haridatta Mp
ನೀವು ಬನ್ನಿ ನಿಮ್ಮವರನ್ನು ಕರೆತನ್ನಿ🙏
ಆನ್ಲೈನ್ ಟಿಕೇಟು ಲಭ್ಯವಿದೆ 👇
6th-Sep:
https://www.spotmyevent.in/events/santhyaaga-ninthaana-kabira-mysuru-2026-85
05/09/2026
ಜಿ.ಪಿ.ಐ.ಇ ಆರ್ ರಂಗತಂಡ, ಮೈಸೂರು
ಅಭಿನಯಿಸುವ ನಾಟಕ
“ಸಂತ್ಯಾಗ ನಿಂತಾನ ಕಬೀರ”
ಹಿಂದಿ ಮೂಲ: ಭೀಷ್ಮ ಸಹಾನಿ
ಕನ್ನಡ ನಾಟಕ ರೂಪ: ಗೋಪಾಲ ವಾಜಪೇಯಿ
ಸಂಗೀತ: ದೇವಾನಂದ ವರಪ್ರಸಾದ್
ವಿನ್ಯಾಸ ಮತ್ತು ನಿರ್ದೇಶನ: ಎಂ.ಪಿ. ಹರಿದತ್ತ ಅರಮನೆನಗರಿ
ದಿನಾಂಕ: 05-09-2026 ಶನಿವಾರ ಮತ್ತು 06-09-2026 ಭಾನುವಾರ
ಸಮಯ: ಸಂಜೆ 6:30 ಕ್ಕೆ
ಸ್ಥಳ: ಕಿರು ರಂಗಮಂದಿರ, ಕಲಾಮಂದಿರ ಆವರಣ, ಮೈಸೂರು
ನೀವು ಬನ್ನಿ ನಿಮ್ಮವರನ್ನು ಕರೆತನ್ನಿ🙏
ಆನ್ಲೈನ್ ಟಿಕೇಟು ಲಭ್ಯವಿದೆ 👇
5th-Sep:
https://www.spotmyevent.in/events/santhyaaga-ninthaana-kabira-mysuru-2026-84
6th-Sep:
https://www.spotmyevent.in/events/santhyaaga-ninthaana-kabira-mysuru-2026-85
19/08/2026
ಜಿ.ಪಿ.ಐ.ಇ ಆರ್ ರಂಗತಂಡ, ಮೈಸೂರು
ಅಭಿನಯಿಸುವ ನಾಟಕ
“ಸಂತ್ಯಾಗ ನಿಂತಾನ ಕಬೀರ”
ಹಿಂದಿ ಮೂಲ: ಭೀಷ್ಮ ಸಹಾನಿ
ಕನ್ನಡ ನಾಟಕ ರೂಪ: ಗೋಪಾಲ ವಾಜಪೇಯಿ
ಸಂಗೀತ: ದೇವಾನಂದ ವರಪ್ರಸಾದ್
ವಿನ್ಯಾಸ ಮತ್ತು ನಿರ್ದೇಶನ: ಎಂ.ಪಿ. ಹರಿದತ್ತ ಅರಮನೆನಗರಿ Haridatta Mp
ದಿನಾಂಕ: 05-09-2026 ಶನಿವಾರ ಮತ್ತು 06-09-2026 ಭಾನುವಾರ
ಸಮಯ: ಸಂಜೆ 6:30 ಕ್ಕೆ
ಸ್ಥಳ: ಕಿರು ರಂಗಮಂದಿರ, ಕಲಾಮಂದಿರ ಆವರಣ, ಮೈಸೂರು
ನೀವು ಬನ್ನಿ ನಿಮ್ಮವರನ್ನು ಕರೆತನ್ನಿ🙏
Mime Ramesh Sharath kumar k v Rohith Shetty Suman Raj Ujwal M
01/06/2026
Are you interested in acting in plays? Then contact us : 9019370060, 95383 56252
27/05/2026
ನಾಟಕಗಳಲ್ಲಿ ಅಭಿನಯಿಸಲು ಆಸಕ್ತಿ ಇದೆಯೇ?
ನಮ್ಮ ತಂಡದ ಮುಂದಿನ ನಾಟಕ ಪ್ರಯೋಗಗಳು ಗುರುಗಳಾದ ಮೈಮ್ ರಮೇಶ್ ಸರ್ Mime Ramesh ನಿರ್ದೇಶನದ “ಗಾಂಧಾರಿ” ಮತ್ತು ಹರಿದತ್ತ Haridatta Mp ನಿರ್ದೇಶನದ “ಸಂತ್ಯಾಗ ನಿಂತಾನ ಕಬೀರ”.
ಸಂಪರ್ಕಿಸಿ: 95358 77695, 95383 56252
25/02/2026
ಇದೇ ಫೆ 27 ಕ್ಕೆ ರಾಷ್ಟ್ರಾದ್ಯಂತ ನಿಮ್ಮನ್ನು ರಂಜಿಸಲು ನಮ್ಮ ಗುರುಗಳಾದ ಮೈಮ್ ರಮೇಶ್ Mime Ramesh ಅವರು ಬೆಳ್ಳಿ ತೆರೆಯ ಮೇಲೆ ಬರುತ್ತಿದ್ದಾರೆ . 😊
fans
23/02/2026
ಗುರುಗಳಾದ ಮೈಮ್ ರಮೇಶ್ Mime Ramesh ಅವರ ಮಾರ್ಗದರ್ಶನದಲ್ಲಿ ನಮ್ಮ ಜಿ ಪಿ ಐ ಇ ಆರ್ ರಂಗತಂಡದ ಮುಂದಿನ ಪ್ರಯೋಗ
‘ಸಂತ್ಯಾಗ ನಿಂತಾನ ಕಬೀರ’
ಹಿಂದಿ ಮೂಲ: ಭೀಷ್ಮ ಸಹಾನಿ
ಕನ್ನಡ ನಾಟಕ ರೂಪ: ಗೋಪಾಲ ವಾಜಪೇಯಿ
ವಿನ್ಯಾಸ ಮತ್ತು ನಿರ್ದೇಶನ: ಎಂ.ಪಿ.ಹರಿದತ್ತ ಅರಮನೆನಗರಿ Haridatta Mp
ನಿರೀಕ್ಷಿಸಿ…
fans
25/01/2026
ಇಂದು ಸಂಜೆ 6:30ಕ್ಕೆ ಮೈಸೂರು ಕಲಾಮಂದಿರ ಆವರಣದ ಕಿರು ರಂಗಮಂದಿರದಲ್ಲಿ…
ಜಿ.ಪಿ.ಐ.ಇ.ಆರ್ ರಂಗತಂಡ ಮೈಸೂರು ಅಭಿನಯಿಸುವ ಜಾನಪದ ನಾಟಕ
“ಮಂಟೇಸ್ವಾಮಿ ಕಥಾ ಪ್ರಸಂಗ”
ರಚನೆ: ಡಾ.ಹೆಚ್.ಎಸ್.ಶಿವಪ್ರಕಾಶ್
ಸಂಗೀತ: ದೇವಾನಂದ ವಾರಪ್ರಸಾದ್, ಅರುಣ್ ಎಂ ಸಿ
ನೃತ್ಯ ಸಂಯೋಜನೆ,ವಿನ್ಯಾಸ ಮತ್ತು ನಿರ್ದೇಶನ: ಮೈಮ್ ರಮೇಶ್ ರಂಗಾಯಣ
ಟಿಕೇಟು ದರ: 100/-
ಹೆಚ್ಚಿನ ಮಾಹಿತಿಗೆ: 95383 56252, 95358 77695
fans
Category
Telephone
Website
Address
Mysore
570005
Alerts
Be the first to know and let us send you an email when GPIER posts news and promotions. Your email address will not be used for any other purpose, and you can unsubscribe at any time.